ಬೆಂಗಳೂರಿನ ನಿರ್ಮಾಪಕ, ಕೆಂಪೇಗೌಡರು, ನಗರದ ಜನರ ನೀರಿನ ಸೌಕರ್ಯಕ್ಕಾಗಿ, ಬೆಂಗಳೂರಿನ ಸುತ್ತಮುತ್ತ ಅನೇಕ ಕೆರೆ-ಕಟ್ಟೆಗಳನ್ನು ಕಟ್ಟಿಸಿದರು. == ಹೆಸರಿಸಬಹುದಾದ ಅಂದಿನ ಕೆರೆಗಳು == ’ಧರ್ಮಾಂಬುಧಿ ಟ್ಯಾಂಕ್,’ (ಪ್ರಸಕ್ತ ಬೆಂಗಳೂರಿನ ಬಸ್ ಸ್ಟ್ಯಾಂಡ್), 'ಸಂಪಂಗೀ ಟ್ಯಾಂಕ್,' (ಪ್ರಸಕ್ತ ಕಂಠೀರವ ಸ್ಟೇಡಿಯಮ್), ’ಕೆಂಪಾಂಬುಧಿ ಟ್ಯಾಂಕ್’, ’ಅಲ್ ಸೂರ್ ಟ್ಯಾಂಕ್’,ಕಾರಂಜಿ ಟ್ಯಾಂಕ್,' ಮತ್ತು 'ಚೆನ್ನಮ್ಮ ಟ್ಯಾಂಕ್,' ಕೆಂಪೇಗೌಡರ ಕಾಲದಲ್ಲೇ ನಿರ್ಮಾಣವಾಗಿದ್ದವು. ಈ ನೀರಿನ ತಾಣಗಳು, ೨೦ ನೆಯ ಶತಮಾನದ ಪ್ರಾರಭದವರೆಗೂ ಬೆಂಗಳೂರಿನ ನಾಗರಿಕರ-ನೀರಿನ ಪೂರೈಕೆಯ ತಾಣಗಳಾಗಿದ್ದವು. ಆದರೆ ಹಿಂದು-ಮುಂದು ನೋಡದೆ, ಮಾಡುತ್ತಿರುವ ನಗರೀಕರಣದ ವ್ಯವಸ್ಥೆಗಳು ಹಾಗೂ ದಕ್ಷ ಆಡಳಿತಗಳ ಅಭಾವದಿಂದ, ಈ ಸುಂದರ ಕೆರೆಗಳು ಅವನತಿಹೊಂದಿ, ಈಗ ಕಣ್ಮರೆಯಾಗಿವೆ. ಅವುಗಳಲ್ಲಿ ಇನ್ನೂ ಕಣ್ಣಿಗೆ ಸ್ವಲ್ಪಮಟ್ಟಿಗೆ ಗೋಚರಿಸುತ್ತಿರುವುದು 'ಅಲಸೂರು ಕೆರೆ,' ಮಾತ್ರ. == 'ಕೆಂಪಾಂಬುಧಿ ಟ್ಯಾಂಕ್' == ಕೆಲವೇ ಕೆರೆಗಳಲ್ಲಿ ದೊಡ್ಡದಾಗಿದ್ದ 'ಕೆಂಪಾಂಬುಧಿ-ಟ್ಯಾಂಕ್', ಈಗ ಅವನತಿಯ ಅಂಚಿಗೆ ಸರಿಯುತ್ತಿರುವ ಕೆರೆಗಳಿಗೆ ಇದೊಂದು ಉತ್ತಮ ಉದಾಹರಣೆಯಾಗಿದೆ. ಅಂದಿನ ದಿನಗಳಲ್ಲಿ ಅವು ಕೇವಲ ನೀರು ಒದಗಿಸುವ ನೀರಿನ-ಆಗರಗಳಾಗದೆ, ಸಾಂಸ್ಕೃತಿಕ, ಧಾರ್ಮಿಕ ಶ್ರದ್ಧೆಗಳ ಹಾಗೂ ಕ್ರೀಡೆಗಳ ಕೇಂದ್ರಸ್ಥಾನವಾಗಿತ್ತು. ೧೯೨೧, ರಲ್ಲಿ 'ಸ್ವಿಮ್ಮಿಂಗ್ ಅಸೊಸಿಯೇಶನ್' ನವರ ಆಶ್ರಯದಲ್ಲಿ, ’ಡಾಲ್ಫಿನ್ ಸ್ವಿಮಿಂಗ್ ಕ್ಲಬ್,’ ಶುರುವಾಯಿತು. ಇದನ್ನು ನಡೆಸಿಕೊಟ್ಟಿದ್ದು, ’ಸ್ಕೌಟ್ ಪ್ರಮುಖ ಕಚೇರಿ’. == 'ಈಜುವ ಕ್ರೀಡೆಯಲ್ಲಿ ತರಬೇತಿ-ಕ್ಲಾಸ್,' ಗಳು ನಡೆಸಲ್ಪಟ್ಟವು == ಈಜುವ ಕ್ರೀಡೆಯಲ್ಲಿ ತರಬೇತಿ-ಕ್ಲಾಸ್ ಗಳು ನಡೆಸಲ್ಪಟ್ಟವು. ೧೯೩೦ ರಲ್ಲಿ ಈ 'ಕ್ಲಬ್', ಜನಪ್ರಿಯವಾಗಿ, ಸುಮಾರು ೨,೦೦೦ ಪುರುಷರು ಹಾಗೂ ೧೮೦ ಮಹಿಳೆಯರು ತರಪೇತಿಪಡೆದರು. ಆಗಿನಕಾಲದ ಹಲವಾರು ಪ್ರಮುಖ ವ್ಯಕ್ತಿಗಳು ಆ ಕ್ಲಬ್ ನ, ಸದಸ್ಯರಾಗಿದ್ದರು. ೧೯೩೪, ೯ ವರ್ಷದ ಹುಡುಗಿ, 'ಬೈರಮ್ಮ,' ಒಟ್ಟಿಗೆ ನಿಲ್ಲಿಸದೆ, ಸತತವಾಗಿ ೧೮ ಗಂಟೆಗಳಕಾಲ ಈ ಕೆರೆಯಲ್ಲಿ ಈಜಿದ್ದನ್ನು. ಆಗಿನಕಾಲದ ಮೈಸೂರಿನ ದಿವಾನ್, ’ಸರ್ ಮಿರ್ಝಾ ಇಸ್ಮಾಯಿಲ್,’ ವೀಕ್ಷಿಸಿದ್ದರು. == ಅತಿ ಹೆಚ್ಚಾದ ನೀರನ್ನು ಹೊರದೂಡುವ ತೂಬುಗಳು == ಇನ್ನೊಂದು ಪ್ರಮುಖ ಹಾಗೂ ಈಗಲೂ ಸಕ್ರಿಯವಾಗಿರುವ ೨ ನೀರನ್ನು ಹೊರದೂಡುವ ತೂಬುಗಳು. ದಾಖಲಿಸಲು ಯೋಗ್ಯವಾದ ಸಂಗತಿಗಳಾಗಿವೆ. ಈ 'ಔಟ್ ಲೆಟ್,' ಗಳು ಕಲ್ಲಿನಿಂದ ಮಾಡಿದ್ದು, ನೀರಿನ ಪ್ರವಹಿಸುವ ಪ್ರಮಾಣವನ್ನು ಅಚ್ಚುಕಟ್ಟಾಗಿ ನಿಯಂತ್ರಿಸುತ್ತಿವೆ. ಸುಂದರ ಮುದನೀಡುವ ತರಹ ಕೆತ್ತನೆ ಕೆಲಸಮಾಡಿರುತ್ತಾರೆ. ಎರಡು ಭೂಮಿಯಿಂದ ಎತ್ತರದ ಮಟ್ಟಗಳಲ್ಲಿ,ನಿರ್ಮಿಸಿದ ಪಾತಳಿಗಳಿವೆ. ೪ ಕಂಬಗಳಿವೆ. ಮತ್ತು ಸೂರಿದೆ. ಎಲ್ಲಾ ಕಂಬಗಳು, ಸೂರು, ಮತ್ತು ಸುತ್ತಮುತ್ತಲ ಜಾಗವನ್ನು ಸುಂದರವಾಗಿ ಸಜಾಯಿಸಲಾಗಿದೆ. == ನೀರಿನ ತೂಬುಗಳ ನಿರ್ಮಾಣದ ನೈಪುಣ್ಯತೆಗಳು == ಒಳ ಸುರಂಗತೋಡಿ ಮಾಡಿದ ಟನಲ್ ಗಳು ಪಕ್ಕ-ಇಟ್ಟಿ, ಮತ್ತು ಗಟ್ಟಿ-ಗಾರೆಗಳಿಂದ ಮಾಡಲ್ಪಟ್ಟಿದೆ. ಒಂದು ಕಬ್ಬಿಣದ ಸಲಾಕೆ, ವಾಲ್ವ್ ಗೆ ಸೇರಿಕೊಂಡಿದೆ. ಹೆಚ್ಚಿನ ನೀರನ್ನು ಹೊರಗೆಹೋಗದಂತೆ ತಡೆಗಟ್ಟುತ್ತದೆ. ಈ ನೀರುಗಂಟಿಯ ಕಾರ್ಯ-ಶೈಲಿಗಳು ಒಳ್ಳೆಯ ಉದಾಹರಣೆಗಳಾಗಿವೆ. ಕೆಂಪೇಗೌಡರ ಸಮಯದಲ್ಲಿ ಅಂದಿದ ನೀರಿನ ತೂಬುಗಳು ಉತ್ಕೃಷ್ಟ ಶ್ರೇಣಿಯ ಕೌಶಲ್ಯಗಳ ಉದಾಹರಣೆಗಳಾಗಿವೆ. ನೀರಾವರಿ ಕಾರ್ಯದಲ್ಲಿ ನಿರತರಾಗಿರುವವರಿಗೆ, ಇವು ಪ್ರಮುಖ ಸ್ಮಾರಕಗಳಲ್ಲದೆ, ಚಾರಿತ್ರ್ಯಿಕ ಪ್ರಾಮುಖ್ಯತೆಯನ್ನೂ ಸಾರುತ್ತವೆ. ಅವನ್ನು ಉಳಿಸಿಕೊಂಡು ಬೆಳೆಸಬೇಕಾದ ಗುರುತರ ಜವಾಬ್ದಾರಿ ನಮ್ಮೆಲ್ಲರಮೇಲಿದೆ. == ಕಾಲಾನುಕ್ರಮದಲ್ಲಿ ಕಣ್ಮರೆಯಾದ, ಬೆಂಗಳೂರಿನ ಕೆರೆ/ಜಲಾಶಯಗಳು == (ಶೂಲೆ ಕೆರೆ) (ಅಕ್ಕಿ ತಿಮ್ಮನ ಹಳ್ಳಿ ಕೆರೆ) (ಸಂಪಂಗಿ ಕೆರೆ) (ಧರ್ಮಾಂಬುಧಿ ಕೆರೆ) (ಚಲ್ಲಘಟ್ಟ ಕೆರೆ) (ಕೋರಮಂಗಲದ ಕೆರೆ) (ಸಿದ್ಧಿಕಟ್ಟೆ ಕೆರೆ) (ಕಾರಂಜಿ ಕೆರೆ) (ಕೆಂಪಾಬುಧಿ ಕೆರೆ) (ನಾಗಶೆಟ್ಟಿಹಳ್ಳಿ ಕೆರೆ) ಕಾಡುಗೊಂಡನ ಹಳ್ಳಿ ಕೆರೆ) (ಡೊಮ್ಲೂರು ಕೆರೆ) (ಮಿಲ್ಲರ್ಸ್ ಕೆರೆ) , (ಸುಭಾಷ್ ನಗರ ಕೆರೆ) (ಕುರುಬರ ಹಳ್ಳಿ ಕೆರೆ) (ಕೋಡಿ ಹಳ್ಳಿ ಕೆರೆ) (ಸಿನಿವೈಗಳು ಕೆರೆ) (ಮಾರೇನ ಹಳ್ಳಿ ಕೆರೆ) (ಶಿವನ ಹಳ್ಳಿ ಕೆರೆ) , (ಚೆನ್ನಮ್ಮನ ಕೆರೆ) , 2nd (ಪುಟ್ಟೇನ ಹಳ್ಳಿ ಕೆರೆ) .. 6th (ಜಕ್ಕರಾಯನ ಕೆರೆ)